ಕಾಲ್ಕಾ-ಶಿಮ್ಲಾ ಪರ್ವತ ರೈಲುಮಾರ್ಗವು ಭಾರತದ ಉತ್ತರಭಾಗದ ಪರ್ವತ ಪ್ರಾಂತ್ಯದಲ್ಲಿನ ಒಂದು ನ್ಯಾರೋಗೇಜ್ ರೈಲುಮಾರ್ಗವಾಗಿದೆ. ಬಯಲುಪ್ರದೇಶದ ಹರ್ಯಾಣಾದ ಕಾಲ್ಕಾದಿಂದ ಹಿಮಾಚಲ ಪ್ರದೇಶದ ಶಿಮ್ಲಾದವರೆಗೆ ಸಾಗುವ ೯೬ ಕಿ.ಮೀ. ಉದ್ದದ ಈ ರೈಲುಮಾರ್ಗವು ವಿಶ್ವದಲ್ಲಿಯೇ ಅತಿ ಹೆಚ್ಚು ಕಡಿದಾದ ರೈಲುಹಾದಿಯೆನಿಸಿದೆ. ೧೯೦೩ರಲ್ಲಿ ಸಂಚಾರಕ್ಕೆ ತೆರೆಯಲ್ಪಟ್ಟ ಈ ಮಾರ್ಗವನ್ನು ಜುಲೈ ೨೦೦೮ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಘೋಷಿಸಿದೆ. ಭಾರತದ ಪರ್ವತ ರೈಲುಮಾರ್ಗಗಳು ಎಂಬ ಶೀರ್ಷಿಕೆಯಡಿ ಈ ಮಾರ್ಗದೊಂದಿಗೆ ದಾರ್ಜೀಲಿಂಗ್ ಪರ್ವತ ರೈಲುಮಾರ್ಗ ಮತ್ತು ನೀಲಗಿರಿ ಪರ್ವತ ರೈಲುಮಾರ್ಗಗಳು ಸಹ ಸೇರಿವೆ. ತನ್ನ ಹಾದಿಯುದ್ದಕ್ಕೂ ಅದ್ಭುತ ಪ್ರಕೃತಿ ಸೌಂದರ್ಯದ ದೃಶ್ಯಗಳನ್ನು ಈ ರೈಲುಮಾರ್ಗ ಪ್ರಯಾಣಿಕರಿಗೆ ತೋರಿಸುತ್ತದೆ. == ಇವನ್ನೂ ನೋಡಿ == ದಾರ್ಜೀಲಿಂಗ್ ಪರ್ವತ ರೈಲುಮಾರ್ಗ ನೀಲಗಿರಿ ಪರ್ವತ ರೈಲುಮಾರ್ಗ ವಿಶ್ವ ಪರಂಪರೆಯ ತಾಣ == ಬಾಹ್ಯ ಸಂಪರ್ಕಕೊಂಡಿಗಳು == ://--./--/--. 2009-01-25 ವೇಬ್ಯಾಕ್ ಮೆಷಿನ್ ನಲ್ಲಿ. ://../2003/20031104/.#1 ://.-./shimla_railway. ://..//---. 2009-01-23 ವೇಬ್ಯಾಕ್ ಮೆಷಿನ್ ನಲ್ಲಿ. ://..//mag_art.?=214&=1 2006-11-10 ವೇಬ್ಯಾಕ್ ಮೆಷಿನ್ ನಲ್ಲಿ. ://../&/.# ://.../r019. 2008-11-03 ವೇಬ್ಯಾಕ್ ಮೆಷಿನ್ ನಲ್ಲಿ. [೧] 2007-06-09 ವೇಬ್ಯಾಕ್ ಮೆಷಿನ್ ನಲ್ಲಿ.